ಕೃತಕ ಬುದ್ಧಿಮತ್ತೆ ಎಂದರೇನು? AI ನಮ್ಮ ಜೀವನವನ್ನು ಹೇಗೆ ಬದಲಾಯಿಸುತ್ತಿದೆ?

ನಮಗೆಲ್ಲರಿಗೂ ತಿಳಿದಿರುವಂತೆ ಕೃತಕ ಬುದ್ಧಿಮತ್ತೆ (Artificial Intelligence)ಎಂದರೆ ಮನುಷ್ಯ ದೈಹಿಕವಾಗಿ ನಿರ್ವಹಿಸಬಹುದಾದ ಕೆಲಸವನ್ನು ತಂತ್ರಜ್ಞಾನ ಆಧಾರಿತವಾದ ಸಾಧನಗಳ ಮೂಲಕ ಮಾಡುವಂತಹ ಅಥವಾ ಮಾಡಿಸುವಂತಹ ಆವಿಷ್ಕಾರವೇ ಕೃತಕ ಬುದ್ಧಿ ಮತ್ತೆ.

ಕೃತಕ ಬುದ್ಧಿಮತ್ತೆ (AI) ಹೇಗೆ ಕೆಲಸ ಮಾಡುತ್ತದೆ:

ನಮ್ಮ ಮೆದುಳಿನ ನಿರ್ಮಾಣದ ಆಧಾರದ ಮೇಲೆ ಈ AI ಹೇಗೆ ಕೆಲಸ ಮಾಡುತ್ತದೆ ಎಂದರೆ ,ನಮ್ಮ ಮೆದುಳು ಹೇಗೆ ಚುರುಕಾಗಿ ಆಲೋಚಿಸಿ ಕೆಲಸ ಮಾಡುತ್ತದೆಯೊ ಅಷ್ಟೇ ಚುರುಕಾಗಿ ಆಲೋಚಿಸಿ ಇದು ಕೆಲಸ ಮಾಡುತ್ತದೆ. ನಾವು ಚಿಕ್ಕ ವಯಸ್ಸಿನಲ್ಲಿ ಸುತ್ತಲಿನ ಘಟನೆಗಳ ಬಗ್ಗೆ ಹೇಗೆ ಕುತೂಹಲವನ್ನು ತಾಳಿ ಅವುಗಳ ಶೋಧನೆಗೆ ತೊಡಗಿ ವಿಚಾರವನ್ನು ತಿಳಿದುಕೊಳ್ಳುವ ಹಂಬಲವನ್ನು ಇಟ್ಟುಕೊಳ್ಳುತ್ತಿದ್ದೆವೊ ಹಾಗೆ AI ಕೂಡ ತನಗೆ ಸಿಕ್ಕ ಡೇಟಾದಿಂದ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳುತ್ತದೆ. ಮನುಷ್ಯನ ಸಹಾಯವಿಲ್ಲದೆ ಎಲ್ಲವನ್ನು ತಾನೇ ಅರಿಯುತ್ತದೆ. ತನ್ನ ಪ್ರೋಗ್ರಾಮನ್ನು ಬದಲಾವಣೆ ಮಾಡಿಕೊಳ್ಳುತ್ತದೆ. ಮನುಷ್ಯನ ಸರಿ ಸಮಾನವಾದ ಸ್ಥಾನಕ್ಕೆ ಈಗ ಎಐ ಬಂದಿದೆ.

ನಮ್ಮ ದೈನಂದಿನ ಜೀವನದಲ್ಲಿ AI ಎಲ್ಲೆಲ್ಲಾ ಇದೆ:

ಈ ನಮ್ಮ ದೈನಂದಿನ ಜೀವನದಲ್ಲಿ ಈ  ಕೃತಕ ಬುದ್ಧಿಮತ್ತೆ ವಿದ್ಯುತ್ ನಂತೆ ಅಂತರ್ಜಾಲದಂತೆ ಸರ್ವ ವ್ಯಾಪಿಯಾಗಿದೆ. ಶಿಕ್ಷಣ, ಆರೋಗ್ಯ ಕೃಷಿ ,ಕೈಗಾರಿಕೆ, ಸಂಶೋಧನೆ ಹೀಗೆ ಅನೇಕ ಕ್ಷೇತ್ರಗಳಲ್ಲಿ  ಎಷ್ಟರಮಟ್ಟಿಗೆ ಇದು ಮುಂದುವರೆದಿದೆ ಎಂದರೆ ನಮಗೆ ಅರಿವಿಲ್ಲದಂತೆ ನಮ್ಮ ಬದುಕನ್ನು ಸುಲಭಗೊಳಿಸುತ್ತಿರುವ, ನಮ್ಮ ನಿರ್ಧಾರಗಳನ್ನು ಪ್ರಭಾವಿಸುತ್ತಿರುವ ಅದೃಶ್ಯ ಶಕ್ತಿಯೇ ಈ AI.

ನಾವು ಪ್ರತಿಕ್ಷಣ ಬಳಸುವ ಮೊಬೈಲ್ ನಲ್ಲಿ:

ಈ ಕೃತಕ ಬುದ್ಧಿಮತ್ತೆ(AI) ಕೇವಲ ದೊಡ್ಡ ಕಂಪನಿಗಳ ಡೇಟಾ ಸೆಂಟರ್ ಗಳಲ್ಲಿ ಮಾತ್ರ ಬಂದಿಯಾಗಿಲ್ಲ. ಬದಲಿಗೆ ನಾವು ನಮ್ಮ ಜೀವನದ ಒಂದು ಭಾಗವಾಗಿಯೇ ಪರಿಗಣಿಸಲ್ಪಟ್ಟ ನಮ್ಮ ಮೊಬೈಲ್ ನಿಂದ ಹಿಡಿದು ನಮ್ಮ ಬದುಕಿನ ಪ್ರತಿಯೊಂದು ಕ್ಷೇತ್ರವನ್ನು ಆವರಿಸಿಕೊಂಡಿದೆ. ನಮಗೆ ಬೇಕಾಗುವ ಮಾಹಿತಿಯನ್ನು ಅತಿ ಶೀಘ್ರದಲ್ಲಿ ನಮ್ಮ ಮೊಬೈಲ್ ನ ಮುಖಾಂತರ ಎಐ ತಂತ್ರಜ್ಞಾನದ ಮೂಲಕ ಪಡೆಯಲು ಸಾಧ್ಯವಾಗುತ್ತದೆ.

ಮನೆಯಲ್ಲಿ ಬಳಸುವ ಭದ್ರತಾ ಸಾಧನಗಳಲ್ಲಿ: 

ಮನೆಯಲ್ಲಿ ಬಳಸುವ ಭದ್ರತಾ ಕ್ಯಾಮರಗಳಲ್ಲಿ ಅಪರಿಚಿತ ವ್ಯಕ್ತಿಗಳನ್ನು ಗುರುತಿಸಲು ಸಹಕಾರಿಯಾಗಿದೆ. ಈ AI ತಂತ್ರಜ್ಞಾನದ ಮೂಲಕ ನಮ್ಮ ಧ್ವನಿಯಿಂದಲೇ ಮನೆಯ ದೀಪಗಳನ್ನು ಹಾಗೂ ಹವಾ ನಿಯಂತ್ರಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಆನ್ಲೈನ್ ಶಾಪಿಂಗ್ ನಲ್ಲಿ:

ಮನೆಯಲ್ಲಿ ಕೂತು ಆನ್ಲೈನ್ ಶಾಪಿಂಗ್  ಮಾಡುವುದಕ್ಕೆ ಸಹಕಾರಿಯಾಗಿದೆ. ನಮ್ಮ ಸ್ಮಾರ್ಟ್ ಫೋನ್ ನಲ್ಲಿ ಅಮೆಜಾನ್ ,ಫ್ಲಿಪ್ಕಾರ್ಟ್ ನಂತಹ ತಾಣಗಳ ಉತ್ಪನ್ನಗಳನ್ನು ಮುಖಪುಟದಲ್ಲಿಯೇ ತೋರಿಸುವ ಕೆಲಸವನ್ನು ಶೀಘ್ರಗತಿಯಲ್ಲಿ ಮಾಡುತ್ತದೆ.

ಬಳಕೆದಾರರ ಅಭಿರುಚಿಗೆ ತಕ್ಕಂತೆ ಮನೋರಂಜನೆ: 

ಬಳಕೆದಾರರ ಅಭಿರುಚಿಗೆ ತಕ್ಕಂತೆ ನಡವಳಿಕೆಯನ್ನು ವಿಶ್ಲೇಷಿಸಿ, ನಾವು ಮೊಬೈಲ್ ನಲ್ಲಿ ನೆಟ್ ಫ್ಲಿಕ್ಸ್ , ಯೂಟ್ಯೂಬ್ ನಂತಹ ವೇದಿಕೆಗಳನ್ನು ತೆರೆದಾಗ ನಾವು ಬಯಸಿದ ಚಲನಚಿತ್ರಗಳು ಹಾಗೂ ಹಾಡುಗಳ ಪಟ್ಟಿ ಕಾಣುತ್ತದೆ.

ಆರೋಗ್ಯ ಕ್ಷೇತ್ರವನ್ನು ಆವರಿಸಿದೆ:

ಜನರ  ಅನಾರೋಗ್ಯಕ್ಕೆ ಕಾರಣ ಏನೆಂದು ಅರಿಯಲು ಮಾಡುವ ಎಕ್ಸ್ ರೇ, ಎಂಆರ್‌ಐ ,ಸಿ ಟಿ ಸ್ಕ್ಯಾನ್ ಗಳಂತಹ ವೈದ್ಯಕೀಯ ಚಿತ್ರಗಳಲ್ಲಿ ಅಡಗಿರುವ ಕ್ಯಾನ್ಸರ್ ಗಡ್ಡೆಗಳು ಹೃದಯದ ತೊಂದರೆಗಳು ಇತರ ಕಾಯಿಲೆಗಳನ್ನು ಪತ್ತೆಹಚ್ಚಲು ವೈದ್ಯರಿಗೆ ಸಹಾಯ ಮಾಡುತ್ತದೆ. ಪ್ರತಿಯೊಬ್ಬ ರೋಗಿಯ ಅನುವಂಶಿಕ ಮಾಹಿತಿ ಜೀವನಶೈಲಿ ಹಾಗೂ ವೈದ್ಯಕೀಯ ಇತಿಹಾಸವನ್ನು ವಿಶ್ಲೇಷಿಸಿ, ಅವರಿಗೆಂದೇ ಸೂಕ್ತವಾದ ಚಿಕಿತ್ಸಾ ಯೋಜನೆಗಳನ್ನು ರೂಪಿಸಲು ನೆರವಾಗುತ್ತದೆ.

AI ರೈತನ ಮಿತ್ರ: 

ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕವಾದ ಬದಲಾವಣೆ ಉಂಟಾಗಲು, ಕೃಷಿ ಅಭಿವೃದ್ಧಿ ಕಾರ್ಯಗಳಿಗೆ ಎಐ ತಂತ್ರಜ್ಞಾನ  ಸಹಕಾರಿಯಾಗಿದೆ. ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಮಾರ್ಗವನ್ನು ಇದು ಸೂಚಿಸುತ್ತದೆ.
ಕೃಷಿ ಭೂಮಿಯಲ್ಲಿನ ನೀರಿನ ಕೊರತೆ ಪೋಷಕಾಂಶಗಳ ಕೊರತೆ ಬೆಳೆಗಳಿಗೆ ಒದಗುವ ಕೀಟಭಾದೆ ಮುಂತಾದ ಸಮಸ್ಯೆಗಳನ್ನು ಶೀಘ್ರವಾಗಿ ಇದು ಗುರುತಿಸುತ್ತದೆ. ಹವಾಮಾನದ ಮುನ್ಸೂಚನೆಯನ್ನು ನೀಡುತ್ತದೆ.

ಶೈಕ್ಷಣಿಕ ಕ್ಷೇತ್ರದಲ್ಲಿ: 

ಶೈಕ್ಷಣಿಕ ಕ್ಷೇತ್ರಕ್ಕೆ ಎಐ ಪ್ರವೇಶದಿಂದ  ಕಲಿಕಾ ವಿಧಾನದಲ್ಲಿ ಶೀಘ್ರಗತಿಯ ಬದಲಾವಣೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯವನ್ನು ತಿಳಿದು ವಿದ್ಯಾರ್ಥಿಯು ಯಾವ ವಿಷಯದಲ್ಲಿ ದುರ್ಬಲನಾಗಿದ್ದಾನೋ ಆ ವಿಷಯದ ಮೇಲೆ ಹೆಚ್ಚು ಗಮನಹರಿಸಲು ಅದಕ್ಕೆ ತಕ್ಕಂತಹ ಪಠ್ಯಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಇದರಿಂದ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಾಗುತ್ತದೆ. ಅಲ್ಲದೇ ಶಿಕ್ಷಕರಿಗೂ ಮೌಲ್ಯಮಾಪನ, ಹಾಜರಾತಿ ನಿರ್ವಹಣೆ ಇತ್ಯಾದಿ ಕೆಲಸಕಾರ್ಯಗಳ ಶೈಲಿಯನ್ನು ಉತ್ತಮಗೊಳಿಸಲು ಉಳಿಸಿಕೊಳ್ಳಲು ಸಹಾಯಕವಾಗಿದೆ

ಔದ್ಯೋಗಿಕ ಕ್ಷೇತ್ರದಲ್ಲಿ:

ಉದ್ಯಮ ಕ್ಷೇತ್ರದ ಉತ್ಪಾದನಾ ಘಟಕಗಳಲ್ಲಿ, ರೋಬೋಟ್ ಗಳು ಹಾಗೂ ಸ್ವಯಂ ಚಾಲಿತ ಯಂತ್ರಗಳ ಜೋಡಣೆ ಮತ್ತು ಪ್ಯಾಕೇಜಿಂಗ್ ನಂತಹ ಕಾರ್ಯಗಳನ್ನು ನಿರ್ವಹಿಸುತ್ತದೆ. ಉತ್ಪಾದನಾ ಗುಣಮಟ್ಟವನ್ನು ಹೆಚ್ಚಿಸುತ್ತದೆ


ಸಾರಿಗೆ ಕ್ಷೇತ್ರದಲ್ಲಿ:

ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಚಾಲಕ ರಹಿತ  ಕಾರುಗಳು ಟ್ರಕ್ ಗಳು ಡ್ರೋನ್ ಗಳು ಇದು AI ಪ್ರವೇಶದ ಬದಲಾವಣೆ ಟ್ರಾಫಿಕ್ ನ ದಟ್ಟಣೆ ಅರಿತು ವಾಹನಗಳ ಚಲಾವಣೆಯ ಸುಗಮ ಮಾರ್ಗವನ್ನು ಇದು ಕಲ್ಪಿಸುತ್ತದೆ

AI ಕೆಲಸ ಕಿತ್ತುಕೊಳ್ಳುತ್ತಾ:

ಇದೀಗ ವಿಜ್ಞಾನ ತಂತ್ರಜ್ಞಾನ ಸಾಕಷ್ಟು ಮುಂದುವರೆದ ಈ ಕಾಲಘಟ್ಟದಲ್ಲಿ ಬದಲಾದ ವ್ಯವಸ್ಥೆಗೆ ಒಗ್ಗಿಕೊಂಡು ಜೀವನ ಸಾಗಿಸಬೇಕಾದ ಅನಿವಾರ್ಯತೆ ಇದೆ. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ತೀವ್ರ ಗತಿಯಲ್ಲಿ ಬೆಳೆಯುತ್ತಾ ಅದು ವಿವಿಧ ಕ್ಷೇತ್ರವನ್ನು ಆವರಿಸಿಕೊಂಡು ಹೊಸ ಆವಿಷ್ಕಾರವನ್ನು ಹುಟ್ಟುಹಾಕಿದೆ.ಯಾವೆಲ್ಲಾ ಕ್ಷೇತ್ರವನ್ನು ಈ ತಂತ್ರಜ್ಞಾನ ಆವರಿಸಿಕೊಂಡಿದಿಯೋ ಆಯಾ ಕ್ಷೇತ್ರದಲ್ಲಿ ಶೀಘ್ರಗತಿಯಲ್ಲಿ ಕೆಲಸ ಕಾರ್ಯಗಳು ಸಾಗುತ್ತಿವೆ. ಅದರೊಂದಿಗೆ ವಿವಿಧ ಕ್ಷೇತ್ರದ ಉದ್ಯೋಗಸ್ಥರಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆಯಿಂದಾಗಿ ತಾವು ತಮ್ಮ ಉದ್ಯೋಗವನ್ನು ಎಲ್ಲಿ ಕಳೆದುಕೊಳ್ಳುತ್ತೇವೆಯೋ ಎಂಬ ಭೀತಿ ಇತ್ತು.

ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಪ್ರವೇಶ ವಾದಂತಹ ಸಂದರ್ಭದಲ್ಲಿ ಕೃಷಿಕರು ಕೆಲಸ ಕಳೆದುಕೊಳ್ಳುತ್ತಾರೆ ಎಂಬ ಭಯವಿತ್ತು. ಕಂಪ್ಯೂಟರ್ ಪ್ರವೇಶದ ನಂತರ ಕಚೇರಿ ಸಿಬ್ಬಂದಿಗೆ ಉದ್ಯೋಗ ನಷ್ಟವಾಗುವ ಭೀತಿ ಇತ್ತು. ಇದು ಜನರ ಊಹೆ ಅಷ್ಟೇ ಆದರೆ, ಇನ್ನು ಅದೇ ತಂತ್ರಜ್ಞಾನಗಳು ಹೊಸ ಉದ್ಯೋಗಗಳನ್ನು ಹೊಸ ಅವಕಾಶಗಳನ್ನು ಸೃಷ್ಟಿಸಿವೆ. ಬಹುಶಹ ಇದೇ ದೃಷ್ಟಿಕೋನದಲ್ಲಿ AIನ್ನು ನೋಡಬೇಕು. ಈಗಾಗಲೇ ಬ್ಯಾಂಕಿಂಗ್ ಆರೋಗ್ಯ ಶಿಕ್ಷಣ ಕೃಷಿ ಕೈಗಾರಿಕೆ ಹೀಗೆ ಹಲವು ಕ್ಷೇತ್ರಗಳನ್ನು AI ಪ್ರವೇಶಿಸಿದೆ ಎಲ್ಲಾ ಕ್ಷೇತ್ರದ ಕಾರ್ಯಕಲಾಪಗಳನ್ನು AI ಚುರುಕುಗೊಳಿಸುತ್ತಿದೆ.

ಆದರೆ ನಾವು ಹೇಗೆ ಅದನ್ನು ಉಪಯೋಗಿಸುತ್ತೇವೆಯೋ ಎಂಬುದೇ ಪ್ರಶ್ನೆ. ಖಂಡಿತವಾಗಿಯೂ ಈ ತಂತ್ರಜ್ಞಾನವನ್ನು ಸೂಕ್ತ ನೈತಿಕ ಮೌಲ್ಯದೊಂದಿಗೆ ಬಳಸಿದರೆ ಅದು ಪ್ರಗತಿಯ ಸಾಧನವಾಗುತ್ತದೆ. ದುರುಪಯೋಗ ಮಾಡಿದರೆ ಅದು ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗೆ ಅತಿ ಸೂಕ್ಷ್ಮವಾಗಿ ಈ ತಂತ್ರಜ್ಞಾನದ ಬಳಕೆ ಮಾಡುವುದು ಸೂಕ್ತ. ಹಾಗಾಗಿ ಈ ತಂತ್ರಜ್ಞಾನ ಬಳಕೆಯ ಎಲ್ಲಾ ಸಾಧ್ಯತೆಗಳನ್ನು ಕಲಿಯುವುದು ಕೂಡ ಸೂಕ್ತವಾಗುತ್ತದೆ. ಅಂದರೆ ಕೂಲಂಕುಶವಾಗಿ ಈ ತಂತ್ರಜ್ಞಾನವನ್ನು ಅರಿಯಬೇಕು. ಅರಿತರೆ ಮಾತ್ರ ಇದರ ಬಳಕೆಯ ಬಗ್ಗೆ ಭಯ ಹುಟ್ಟುವುದಿಲ್ಲ. ಹಾಗಾಗಿ ಎಐ ತಂತ್ರಜ್ಞಾನವನ್ನು ಸರಿಯಾಗಿ ತಿಳಿದುಕೊಳ್ಳದೆ ಅದನ್ನು ವೈಭವಿಕರಿಸುವುದು ತಪ್ಪಾಗುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸುವುದು ಸೂಕ್ತ. 

AIನ ಅನುಕೂಲತೆಗಳು:

AI ನಿಂದ ಹಲವಾರು ಪ್ರಯೋಜನಗಳನ್ನು ನಾವು ಪಡೆಯಬಹುದು.  ಅದಕ್ಕಿಂತ ಮೊದಲು ನಾವು AIಗೆ ಅಪ್ಡೇಟ್ ಆಗ್ಬೇಕು ಅಂದರೆ ಎಐ ತಂತ್ರಜ್ಞಾನದ ಬಗ್ಗೆ ಮಾಹಿತಿಯನ್ನು ಮೊದಲು ತಿಳಿದುಕೊಳ್ಳಬೇಕು. ಆಗ ಅದರಿಂದ ನಮಗೆ ಸಿಗುವ ಪ್ರಯೋಜನಗಳ ಅರಿವು ನಮಗಾಗುತ್ತದೆ. ಈ ತಂತ್ರಜ್ಞಾನದ ಅನುಕೂಲತೆಗಳು ಹೀಗಿವೆ.
* AI ತಂತ್ರಜ್ಞಾನದ ಪ್ರಯೋಜನವನ್ನು ಅರಿತು  ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಗೃಹಿಣಿಯರು, ಸಣ್ಣಪುಟ್ಟ ಕೆಲಸವನ್ನು ನಿರ್ವಹಿಸುವವರು, ಸೈಡ್ ಬಿಸಿನೆಸ್ ಅನ್ನು ಮಾಡುತ್ತಿದ್ದಾರೆ.
* ಗೌರ್ಮೆಂಟ್ ಜಾಬ್ ನಲ್ಲಿದ್ದವರಿಗೆ ಕೆಲಸದ ಹೊರೆ ಕಡಿಮೆಯಾಗುತ್ತಿದೆ. ಲೆಟರ್ ಮಾಡಬೇಕು, ರಿಪೋರ್ಟ್ ಮಾಡಬೇಕು, ಪ್ರಾಜೆಕ್ಟ್ ಮಾಡಬೇಕು, ಅಂತಿದ್ದರೆ ಸಹಾಯ ಮಾಡುತ್ತದೆ.
* ಇನ್ನು ಬಿಸಿನೆಸ್ ಮಾಡುವವರಿಗೆ ಜಾಹೀರಾತು ಮಾಡಬೇಕು, ಹೊಸ ಅವಕಾಶಗಳನ್ನು ತಿಳಿದುಕೊಳ್ಳಬೇಕು ಎನ್ನುವ ಹಂಬಲ ಇದ್ದರೆ ಇದಕ್ಕೆ ಎಐ ಸಹಾಯ ಮಾಡುತ್ತದೆ.
* ಸಣ್ಣ ಹಾಗೂ ದೊಡ್ಡ ಉದ್ದಿಮೆದಾರರಿಗೆ ಬೇಕಾದ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ
* ಇನ್ನು ಡಾಕ್ಟರ್, ಇಂಜಿನಿಯರ್ ಗಳು ,ಲಾಯರ್ಸ್ ಗಳು ಇವರಿಗೆ ಅವರ ಕ್ಷೇತ್ರಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.
* ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ರೀತಿಯ ಶೈಕ್ಷಣಿಕ ಮಾಹಿತಿಯನ್ನು ಸಂಪೂರ್ಣವಾಗಿ ಒದಗಿಸುತ್ತದೆ.
ಹಾಗಾಗಿ ಮುಂದಿನ ಜಗತ್ತಿಗೆ ಹೊಂದಿಕೊಂಡು ನಾವು ಬದುಕಬೇಕಾದರೆ ಎಐ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ತಿಳಿದುಕೊಳ್ಳಲೇಬೇಕಾಗುತ್ತದೆ.

AI ನ ಅನಾನುಕೂಲತೆಗಳು:

AI ತಂತ್ರಜ್ಞಾನದಿಂದ ಎಷ್ಟು ಅನುಕೂಲತೆಗಳಿದೆಯೋ ಅಷ್ಟೇ ಅನಾನುಕೂಲತೆಗಳು ಕೂಡ ಇದೆ. ಹಾಗಾಗಿ ಎಐ ತಂತ್ರಜ್ಞಾನದ ಬಳಕೆಯಿಂದ ಆಗುವ ಅನಾನುಕೂಲತೆಗಳ ಬಗ್ಗೆಯೂ ಕೂಡ ತಿಳಿದುಕೊಳ್ಳಬೇಕಾದಂತಹ ಅವಶ್ಯಕತೆ ಖಂಡಿತ ಇದೆ. ಆ ಅನಾನುಕೂಲತೆಗಳು ಹೀಗಿವೆ
ಹೆಚ್ಚು ವೆಚ್ಚ ತಗಲುತ್ತದೆ: AI ತಂತ್ರಜ್ಞಾನ ವನ್ನು ಸಿದ್ಧಪಡಿಸುವುದು ಅಷ್ಟು ಸುಲಭದ ಕೆಲಸವೇನಲ್ಲ. ಈ ತಂತ್ರಜ್ಞಾನವನ್ನು ತಯಾರಿಸಲು ಅತಿ ಹೆಚ್ಚು ಹಣದ ಅವಶ್ಯಕತೆ ಇದೆ.
ಉದ್ಯೋಗ ಕಳೆದುಕೊಳ್ಳುವ ಭೀತಿ: ಅತಿ ಹೆಚ್ಚು ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಉದ್ಯೋಗ ಕ್ಷೇತ್ರಕ್ಕೆ ಎಐ ನ ಪ್ರವೇಶದಿಂದಾಗಿ ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಮನುಷ್ಯನ ಬೌದ್ಧಿಕ ಮಟ್ಟ ಕುಸಿಯುತ್ತದೆ: ಉದ್ಯೋಗ, ಕೃಷಿ, ಶಿಕ್ಷಣ, ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಎಐ ಪ್ರವೇಶ ಪಡೆದು ಸ್ವತಹ ಎಲ್ಲಾ ಕೆಲಸವನ್ನು ನಿರ್ವಹಿಸುವುದರಿಂದ, ಮನುಷ್ಯ ಕ್ರಿಯಾ ಶೀಲವಾದ ಆಲೋಚನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಅವಕಾಶ ಸಿಗದೆ ಮನುಷ್ಯನ ಮೆದುಳು ನಿಷ್ಕ್ರಿಯಗೊಂಡು ಅವನ ಬೌದ್ಧಿಕ ಮಟ್ಟ ಕುಸಿಯುವ ಅಪಾಯ ಎದುರಾಗುತ್ತದೆ.


ನೈತಿಕ ಪ್ರಶ್ನೆ: ನಾವು AI ತಂತ್ರಜ್ಞಾನದೊಂದಿಗೆ ನಮ್ಮೆಲ್ಲ ವಿಚಾರಗಳನ್ನು ಹಂಚಿಕೊಳ್ಳುವುದರಿಂದ ನಮ್ಮ ವೈಯಕ್ತಿಕ ಡೇಟಾವನ್ನು ಕಾಪಾಡಿಕೊಳ್ಳುವ ನೈತಿಕ ಪ್ರಶ್ನೆಯು ಎದುರಾಗುತ್ತದೆ
ಮಿತಿ: AI ತಂತ್ರಜ್ಞಾನ ತಾನು ಕಲಿತ ಮಾಹಿತಿಯ ಮಿತಿಯೊಳಗೆ ಕೆಲಸ ಮಾಡುತ್ತದೆ. ಅದಕ್ಕೆ ಮನುಷ್ಯನಂತೆ  ಹೊಸ ವಿಚಾರಗಳನ್ನು ಸ್ವತಂತ್ರವಾಗಿ ಆಲೋಚಿಸುವ ಶಕ್ತಿ ಇಲ್ಲ. 

ಕೃತಕ ಬುದ್ಧಿಮತ್ತೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ Open AI ಅಧಿಕೃತ ವೆಬ್‌ಸೈಟ್‌ ಬೇಟಿ ನೀಡಬಹುದು.

? ಸಾಮಾನ್ಯ ಪ್ರಶ್ನೆಗಳು (FAQ)

1.Ai ಎಂದರೇನು ?

Ai (ಕೃತಕ ಬುದ್ಧಿಮತ್ತೆ) ಅಂದರೆ ಯಂತ್ರಗಳು ಮಾನವರಂತೆ ಯೋಚಿಸುವುದು, ಕಲಿಯುವುದು, ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುವ ತಂತ್ರಜ್ಞಾನ.

2.AI ಹೇಗೆ ಕೆಲಸ ಮಾಡುತ್ತದೆ ?

AI ಡೇಟಾ ಸಂಗ್ರಹಿಸಿ, ಅದನ್ನು ವಿಶ್ಲೇಷಿಸಿ, machine learning ಮತ್ತು algorithms ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.

3.AI ನಮ್ಮ ದಿನನಿತ್ಯ ಜೀವನದಲ್ಲಿ ಎಲ್ಲಿದೆ?

ಮೊಬೈಲ್‌ voice assistance, Google search, You Tube recommendation, online shopping, banking apps ಎಲ್ಲೆಲ್ಲೂ AI ಬಳಸಲಾಗುತ್ತಿದೆ.

4. Ai ಬಳಸುವ ಮುಖ್ಯ ಕ್ಷೇತ್ರಗಳು ಯಾವುವು ?

ಶಿಕ್ಷಣ, ವೈದ್ಯಕೀಯ, ಕೃಷಿ, ಬ್ಯಾಂಕಿಂಗ್, ಟ್ರಾನ್ಸ್ಪೋರ್ಟ್ ಮತ್ತು ಉದ್ಯಮ ಕ್ಷೇತ್ರಗಳಲ್ಲಿ AI ವ್ಯಾಪಕವಾಗಿ ಬಳಸಲಾಗುತ್ತದೆ.

5. Ai ಮಾನವರ ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆಯೇ?

ಕೆಲವು ಕೆಲಸಗಳನ್ನು automation ಮಾಡಬಹುದು. ಆದರೆ ಹೊಸ ರೀತಿಯ ಉದ್ಯೋಗಗಳು ಕೂಡ ಸೃಷ್ಟಿಯಾಗುತ್ತದವೆ.

6.Ai ಭವಿಷ್ಯ ಹೇಗಿರುತ್ತದೆ?

ಭವಿಷ್ಯದಲ್ಲಿ AI ಇನ್ನಷ್ಟು ವೇಗವಾಗಿ ಅಭಿವೃದ್ಧಿಯಾಗುತ್ತದೆ. ಆರೋಗ್ಯ, ಶಿಕ್ಷಣ, ಉದ್ಯಮ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆ ತರಬಹುದು.

7.Ai ಮತ್ತು ಕೃತಕ ಬುದ್ಧಿಮತ್ತೆ ಒಂದೇನಾ?

ಹೌದು AI ಎಂದರೆ Artificial Intelligence ಅದನ್ನು ಕನ್ನಡದಲ್ಲಿ ಕೃತಕ ಬುದ್ಧಿಮತ್ತೆ ಎಂದು ಕರೆಯುತ್ತಾರೆ 

Leave a comment