2026ರಲ್ಲಿ ಬರುವ ಎಲ್ಲಾ ಪೂರ್ಣಚಂದ್ರ ದಿನಗಳು|2026 Full Moon Dates in Kannada.

2026 Full moon dates in kannada ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ. ಪೂರ್ಣಚಂದ್ರ ಎಂದರೆ ಚಂದ್ರನು ಭೂಮಿಗೆ ಸಂಪೂರ್ಣವಾಗಿ ಪ್ರಕಾಶಮಾನವಾಗಿ ಕಾಣುವ ದಿನ. ಈ ದಿನ ಚಂದ್ರನು ಸೂರ್ಯನಿಗೆ ನೇರವಾಗಿ ಎದುರಾಗಿ ಇರುವುದರಿಂದ ಪೂರ್ಣವಾಗಿ ಗೋಚರಿಸುತ್ತಾನೆ. ಭಾರತೀಯ ಸಂಸ್ಕೃತಿಯಲ್ಲಿ ಪೂರ್ಣಚಂದ್ರಕ್ಕೆ ಧಾರ್ಮಿಕ ,ವೈಜ್ಞಾನಿಕ, ಹಾಗೂ ಮಾನಸಿಕ ಮಹತ್ವ ಇದೆ. ಈ ದಿನ ಉಪವಾಸ, ಪೂಜೆ, ಧ್ಯಾನ, ಆಚರಣೆಗಳಿಗೆ ಉಪಯುಕ್ತವಾದ ದಿನ.

2026 Full Moon List (ತಿಂಗಳಿಗನುಗುಣವಾಗಿ):

ಈ ಕೆಳಗೆ 2026 ರಲ್ಲಿ ಬರುವ ಎಲ್ಲಾ ಪ್ರಮುಖ ಪೂರ್ಣಚಂದ್ರಗಳ ಸಾಮಾನ್ಯ ಪಟ್ಟಿಯನ್ನು ನೀಡಲಾಗಿದೆ.

ಜನವರಿ 2026 – Wolf Moon: ಜನವರಿ ತಿಂಗಳ ತೀವ್ರ ಚಳಿಯಿಂದಾಗಿ ಯುರೋಪ್ ಮತ್ತು ಅಮೆರಿಕದ ಗ್ರಾಮೀಣ ಪ್ರದೇಶಗಳಲ್ಲಿ ತೋಳಗಳ ಕೂಗು ಕೇಳಿ ಬರುತ್ತದೆ. ಅದಕ್ಕಾಗಿ ಈ ಹುಣ್ಣಿಮೆಯನ್ನು  ವುಲ್ಫ್ ಮೂನ್ ಎಂದು ಕರೆಯಲಾಗಿದೆ. ಇದನ್ನು ಪೌಶ್ ಪೂರ್ಣಿಮಾ ಎಂದು ಕರೆಯುತ್ತಾರೆ.ವರ್ಷದ ಮೊದಲ ಸೂಪರ್ ಮೂನ್. ಚಳಿಗಾಲದಲ್ಲಿ ಹಿಮಪಾತ ಹಾಗೂ ತೀವ್ರ ಚಳಿಯಿಂದ ತೋಳಗಳಿಗೆ ಆಹಾರ ದೊರಕುವುದು ಕಷ್ಟವಾಗುತ್ತಿತ್ತು. ಈ ಸಮಯದಲ್ಲಿ ತೋಳಗಳು ಹಸಿವಿನಿಂದ ಊರುಗಳ ಸುತ್ತ ಕೂಗುತ್ತಿದ್ದವು. ಎಂಬ ನಂಬಿಕೆ ಇದೆ.

ಫೆಬ್ರವರಿ 2026 – Snow Moon: ಫೆಬ್ರವರಿ ಸಮಯದಲ್ಲಿ ಅಮೆರಿಕದ ವಿವಿಧ ಭಾಗಗಳಲ್ಲಿ ಭಾರಿ ಹಿಮಪಾತವಾಗುತ್ತದೆ. ಇದರೊಂದಿಗೆ ಅನೇಕ ಪ್ರದೇಶಗಳು ಹಿಮ ಬಿರುಗಾಳಿಗಳನ್ನು ಸಹ ವೀಕ್ಷಿಸುತ್ತದೆ. ಹಿಂದೂ ಕ್ಯಾಲೆಂಡರ್ ನ ಪ್ರಕಾರ ಈ ದಿನವನ್ನು ಮಾರ್ಗ ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಹಿಂದುಗಳಿಗೆ ಈ ದಿನ ಬಹಳ ಪವಿತ್ರವಾದ ದಿನ. ನಾವು ನಮ್ಮ ಜೀವನದ ಕಠಿಣ ಹಂತಗಳಲ್ಲಿಯೂ ಸಹನೆ ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳಬೇಕು ಎಂಬ ಜೀವನದ ಪಾಠವನ್ನು ಕಲಿಸುತ್ತದೆ. ಹೊರಗೆ ಕೊರೆಯುವ ಹಿಮಚಳಿ ಇದ್ದರೂ ಚಂದ್ರನು ಹೇಗೆ ಶಾಂತವಾಗಿ ಪ್ರಕಾಶಿಸುತ್ತಾನೋ ನಾವು ಕೂಡ ಜೀವನದಲ್ಲಿ ಎದುರಾಗುವ ಸಂಕಷ್ಟಗಳ ನಡುವೆ ಶಾಂತತೆ ಸಹನೆಯನ್ನು ಕಳೆದುಕೊಳ್ಳಬಾರದೆನ್ನುವ ಸೂಚನೆ ಈ ಹುಣ್ಣಿಮೆಯದ್ದು. ಹಾಗಾಗಿ ಇದು ಮಹತ್ವದ ಹುಣ್ಣಿಮೆಯಾಗಿದೆ.

ಮಾಘಮಾಸದಲ್ಲಿ ಬರುವ ಪೂರ್ಣಚಂದ್ರಕ್ಕೆ ಧಾರ್ಮಿಕವಾಗಿ ಹೆಚ್ಚಿನ ಮಹತ್ವ ಇದೆ.


ಮಾರ್ಚ್ 2026 – Worm Moon: ಮಾರ್ಚ್ ತಿಂಗಳಲ್ಲಿ ಚಳಿಗಾಲ ಕೊನೆಗೊಂಡು ಸೆಕೆಗಾಲ ಆರಂಭವಾಗುತ್ತದೆ. ಕ್ರಮೇಣ ಶಾಖ ಹೆಚ್ಚಾಗುತ್ತದೆ. ವಸಂತ ಋತುವಿನ ಆಗಮನದ ಸಂದರ್ಭ ಇದು. ಹಿಂದೂ ಕ್ಯಾಲೆಂಡರ್ ನ ಪ್ರಕಾರ ಈ ದಿನವನ್ನು ಪಾಲ್ಗುಣ ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಕೃಷಿ ಚಟುವಟಿಕೆಗಳು ಆರಂಭಗೊಳ್ಳುತ್ತದೆ. ಮುಖ್ಯವಾಗಿ  ಎರೆಹುಳುಗಳು ನೆಲದ ಮೇಲೆ ಕಾಣಿಸಿಕೊಳ್ಳುವ ಸಮಯ. ಆದ್ದರಿಂದ ಭೂಮಿ ಫಲವತ್ತತೆ ಗೊಳ್ಳುತ್ತದೆ.


ಏಪ್ರಿಲ್ 2026 – Pink Moon: ಹೂವಿನ ಋತುವಿನ ಸಂಕೇತ.  ಏಪ್ರಿಲ್ ತಿಂಗಳಲ್ಲಿ ಈ ಹುಣ್ಣಿಮೆ ಕಾಣಿಸುತ್ತದೆ. ಇದನ್ನು ಗುಲಾಬಿ ಚಂದ್ರ ಎಂದು ಕರೆಯುವರು. ಭಾರತದಲ್ಲಿ ಈ ಹುಣ್ಣಿಮೆಯನ್ನು ಚೈತ್ರ ಪೂರ್ಣಿಮೆ ಎಂದು ಕರೆಯುತ್ತಾರೆ. ಗುಲಾಬಿ ಚಂದ್ರ ಎಂದರೆ ಚಂದ್ರನು ಗುಲಾಬಿ ಬಣ್ಣದಿಂದಿರುವುದು ಅಲ್ಲ. ಬದಲಾಗಿ ಪ್ರಕೃತಿಯಲ್ಲಿ ಹೂವಿನ ಅರಳುವಿಕೆ ಮತ್ತು ಹೊಸ ಜೀವನದ ಆರಂಭವನ್ನು ಸೂಚಿಸುವ ಹೆಸರು. ಪಿಂಕ್ ಮೂನ್ ವಸಂತ ಋತುವಿನ ಸಂಕೇತ. ಚಳಿಗಾಲದ ನಂತರ ಪ್ರಕೃತಿ ಮತ್ತೆ ಜೀವಂತವಾಗಿರುವ ಕಾಲ. ಮರಗಳು ಹಸಿರಾಗಿರುತ್ತದೆ.ಹೂಗಳು ಅರಳುತ್ತದೆ. ಹೊಸ ಜೀವನ ಚಕ್ರ ಆರಂಭವಾಗುತ್ತದೆ ಎನ್ನುವ ಸೂಚನೆ.


ಮೇ 2026 – Flower Moon: ಮೇ ತಿಂಗಳಿನಲ್ಲಿ ಅಮೆರಿಕದ ಗ್ರೇಟ್ ಲೇಕ್ಸ್ ಪ್ರದೇಶದಲ್ಲಿ ಬಹಳಷ್ಟು ಹೂಗಳು ಅರಳುತ್ತದೆ. ಹೀಗಾಗಿ ಇದಕ್ಕೆ ಫ್ಲವರ್ ಮೂನ್ ಎಂದು ಹೆಸರಿಸಲಾಗಿದೆ. ಹಿಂದೂ ಕ್ಯಾಲೆಂಡರ್ ನ ಪ್ರಕಾರ ಈ ದಿನವನ್ನು ಬೌದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ.ಇದು ವಸಂತ ಋತುವಿನ ಶೃಂಗ ಸ್ಥಿತಿಯನ್ನು ಸೂಚಿಸುತ್ತದೆ. ಚಳಿಗಾಲದ ನಂತರ ಪ್ರಕೃತಿ ಸಂಪೂರ್ಣವಾಗಿ ಜೀವಂತವಾಗಿರುವುದು. ಅಂದರೆ ಪ್ರಕೃತಿಯ ಚರಾಚರ ಜೀವಿಗಳು ಚಟುವಟಿಕೆಯಲ್ಲಿರುವ ಸೂಚನೆ, ಜೇನುಹುಳುಗಳು ಹಕ್ಕಿ ಪಕ್ಷಿಗಳ ಚಟುವಟಿಕೆ ಈ ಸಮಯದಲ್ಲಿ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಫ್ಲವರ್ ಮೂನನ್ನು ಬೆಳವಣಿಗೆ, ಸಮೃದ್ಧಿ, ಸಂತೋಷದ ಸಂಕೇತವಾಗಿ ಕಾಣಲಾಗುವುದು.
ಆಧ್ಯಾತ್ಮಿಕ ದೃಷ್ಟಿ: ಹೂವು ಅರಳಿ ತನ್ನ ಸೌಂದರ್ಯವನ್ನು ಹೆಚ್ಚಿಸುವ ಹಾಗೆ ಮನುಷ್ಯ ತನ್ನ ಅಧ್ಯಾತ್ಮಿಕ ದೃಷ್ಟಿಕೋನವನ್ನು ಉನ್ನತಿಗೊಳಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ಈ ಮೇ ತಿಂಗಳ ಪೂರ್ಣಚಂದ್ರ ಸಾಮಾನ್ಯವಾಗಿ ವೈಶಾಖ ಮಾಸದ ಪೌರ್ಣಿಮೆಯಾಗಿ ಕಂಡುಬರುತ್ತದೆ.


ಜೂನ್2026 – Strawberry Moon: ಜೂನ್ ತಿಂಗಳಲ್ಲಿ ಈ ಹುಣ್ಣಿಮೆ ಬರುತ್ತದೆ. ಈ ಸಮಯದಲ್ಲಿ ಕೆನಡ, ಅಲಸ್ಕ, ಸೇರಿದಂತೆ 48 ಪ್ರದೇಶಗಳಲ್ಲಿ ಸ್ಟ್ರಾಬೆರಿ ಕೊಯ್ಲು ಮಾಡಲಾಗುತ್ತದೆ. ಹಾಗಾಗಿ ಇದಕ್ಕೆ ಸ್ಟ್ರಾಬೆರಿ ಮೂನ್ ಎಂದು  ಹೆಸರು.ಭಾರತೀಯ ಸಂಸ್ಕೃತಿಯಲ್ಲಿ ಜೇಷ್ಠ ಮಾಸದ ಹುಣ್ಣಿಮೆಯಾಗಿ ಇದು ಬರುತ್ತದೆ.


ಜುಲೈ 2026- Buck Moon: ಜುಲೈ ತಿಂಗಳಲ್ಲಿ ಈ ಹುಣ್ಣಿಮೆ ಬರುತ್ತದೆ. ಇದನ್ನು ಸಾಲ್ಮಾನ್ ಮೂನ್ ಎನ್ನುವರು. ಹಿಂದೂ ಕ್ಯಾಲೆಂಡರ್ ನ ಪ್ರಕಾರ ಇದನ್ನು ಗುರುಪೂರ್ಣಿಮೆ ಎಂದು ಕರೆಯುತ್ತಾರೆ.ಕೆಲ ಸಂಸ್ಕೃತಿಯಲ್ಲಿ ಬಕ್ ಮೂನ್ ಧೈರ್ಯ, ಶಕ್ತಿ, ನಾಯಕತ್ವದ ಸಂಕೇತ. ಗಂಡು ಜಿಂಕೆ ತನ್ನ ಕೊಂಬುಗಳ ಮೂಲಕ ಶಕ್ತಿಯನ್ನು ಪ್ರದರ್ಶಿಸುವಂತೆ. ಮನುಷ್ಯ ತನ್ನೊಳಗಿನ ಶಕ್ತಿಯನ್ನು ಗುರುತಿಸಿಕೊಳ್ಳಬೇಕು. ಎನ್ನುವುದರ ಸಂಕೇತ. ಹಾಗೆ ಇದು ಮಾರ್ಗದರ್ಶನ ನೀಡಿದ ಗುರುಗಳಿಗೆ ಗೌರವ ಸಲ್ಲಿಸುವ ಶುಭದಿನ.


ಅಗಸ್ಟ್ 2026 – Sturgeon Moon: ಅಗಸ್ಟ್ ತಿಂಗಳಲ್ಲಿ ಬರುವ ಹುಣ್ಣಿಮೆ ಇದು. ಉತ್ತರ ಅಮೆರಿಕದ ಸ್ಥಳೀಯ ಬುಡಕಟ್ಟು ಜನಾಂಗದವರು ಈ ಸಮಯದಲ್ಲಿ ಗ್ರೇಟ್ ಲೇಕ್ಸ್ ನಲ್ಲಿ ಹೇರಳವಾಗಿ ಸಿಗುವ ಸ್ಟರ್ಜನ್ ಮೀನುಗಳ ಗೌರವಾರ್ಥವಾಗಿ ಇದಕ್ಕೆ ಈ ಹೆಸರನ್ನು ಇಟ್ಟರು.ಈ ಸಮಯದಲ್ಲಿ ನದಿ ಸರೋವರಗಳು ತುಂಬಿಕೊಂಡಿರುತ್ತದೆ. ಆಧ್ಯಾತ್ಮಿಕ ದೃಷ್ಟಿಯಿಂದ ಸ್ಟರ್ಜನ್ ಮೂನ್ ಕೃತಜ್ಞತೆ ಮತ್ತು ಸಮತೋಲನದ ಸಂಕೇತ. ಈ ಸಮಯದಲ್ಲಿ ಜೀವನದಲ್ಲಿ ನಮಗೆ ದೊರೆತ ಸಂಪನ್ಮೂಲಗಳನ್ನು ಗೌರವಿಸುವುದು ಹಾಗೂ ಅವುಗಳನ್ನು ಜಾಣ್ಮೆಯಿಂದ ಬಳಸುವುದು ಸೂಕ್ತ ಎಂಬ ಸಂದೇಶವನ್ನು ಇದು ನೀಡುತ್ತದೆ. ಭಾರತದಲ್ಲಿ ಆಗಸ್ಟ್ ತಿಂಗಳ ಪೂರ್ಣಚಂದ್ರ ಸಾಮಾನ್ಯವಾಗಿ ಶ್ರಾವಣ ಮಾಸದ ಪೌರ್ಣಿಮೆಯಾಗಿ ಕಂಡುಬರುತ್ತದೆ. ಶ್ರಾವಣ ಪೌರ್ಣಿಮೆ ರಕ್ಷಾಬಂಧನ ಹಾಗೂ ಉಪಕರ್ಮ ಇತ್ಯಾದಿ ಹಬ್ಬಗಳಿಗೆ ಪ್ರಸಿದ್ಧವಾಗಿದೆ. ಈ ಪೂರ್ಣ ಚಂದ್ರನ ಬೆಳಕು ನೀರಿನ ಮೇಲೆ ಬೀಳುವುದರಿಂದ ಮೀನುಗಳು ಹೆಚ್ಚು ಚಟುವಟಿಕೆಯಲ್ಲಿರುತ್ತದೆ ಮತ್ತು ಮೀನುಗಾರಿಕೆ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇದೆ.


ಸೆಪ್ಟೆಂಬರ್2026 – Harvest Moon:ಸೆಪ್ಟೆಂಬರ್ ತಿಂಗಳಲ್ಲಿ ಬರುವ ಹುಣ್ಣಿಮೆ ಇದು. ಹಿಂದಿನ ಕಾಲದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದ ಸಮಯದಲ್ಲಿ ರಾತ್ರಿ ವೇಳೆಯಲ್ಲಿ ಬೆಳೆಯ ಕಟಾವಿಗೆ ಅಗತ್ಯವಾದ ಬೆಳಕನ್ನು ಈ ಹುಣ್ಣಿಮೆಯ ಚಂದ್ರ ಒದಗಿಸುತ್ತಾನೆ. ಆದ್ದರಿಂದ ಈ ಪೂರ್ಣಿಮೆಯ ಚಂದ್ರನನ್ನು ಸುಗ್ಗಿಯ ಚಂದ್ರ ಎನ್ನುವರು.ಶರತ್ಕಾಲದ ಆರಂಭದ ಸಂಕೇತ ಇದು. ಹಿಂದಿನ ಕಾಲದವರ ನಂಬಿಕೆ ಏನೆಂದರೆ, ಹಾರ್ವೆಸ್ಟ್ ಮೂನ್ ಹೆಚ್ಚು ಕೆಂಪು ಅಥವಾ ಹಳದಿ ಬಣ್ಣದಲ್ಲಿ ಕಾಣಿಸಿದರೆ  ಬೆಳೆದ ಬೆಳೆ ಚೆನ್ನಾಗಿರುತ್ತದೆ ಎಂಬ ನಂಬಿಕೆ ಇದೆ. ಈ ಬಣ್ಣ ವಾತಾವರಣದ ಪರಿಣಾಮದಿಂದ ಉಂಟಾಗುತ್ತದೆ ಎಂಬ ವೈಜ್ಞಾನಿಕ ಕಾರಣ ತಿಳಿಯದ ಜನ ಅದನ್ನು ಶುಭ ಸೂಚನೆ ಎಂದು ನಂಬುತ್ತಿದ್ದರು.

ಅಕ್ಟೋಬರ್ 2026 – Hunter’s Moon: ಅಕ್ಟೋಬರ್ ತಿಂಗಳಲ್ಲಿ ಬರುವ ಹುಣ್ಣಿಮೆ ಇದು. ಈ ಹುಣ್ಣಿಮೆಯ ಬೆಳಕಿನಲ್ಲಿ ರಾತ್ರಿ ವೇಳೆ ಬೇಟೆಗಾರರಿಗೆ ಬೇಟೆಯಾಡಲು ಅನುಕೂಲವಾಗುತ್ತದೆ. ಹಾಗಾಗಿ ಈ ಪೂರ್ಣಿಮೆಯನ್ನು ಹಂಟರ್ ಪೂರ್ಣಿಮೆ ಅಥವಾ ಹಂಟರ್ ಮೂನ್ ಎನ್ನುವರು.ಭಾರತೀಯ ಸಂಸ್ಕೃತಿಯಲ್ಲಿ ಈ ಹುಣ್ಣಿಮೆಯ ಸಂದರ್ಭದಲ್ಲಿ ಶರವನ್ನವರಾತ್ರಿ ಪೂಜೆ ಹಾಗೂ ವಿಜಯದಶಮಿ ಇತ್ಯಾದಿ ಹಬ್ಬಗಳು ನಡೆಯುತ್ತದೆ. ಸಿದ್ಧತೆ ಶಕ್ತಿ ಮತ್ತು ಜನರ ಜಯದ ಸಂಕೇತ ಇದು.


ನವಂಬರ್2026 – Beaver Moon: ನವಂಬರ್ ತಿಂಗಳಲ್ಲಿ ಬರುವ ಹುಣ್ಣಿಮೆ ಇದು. ಈ ವರ್ಷದ ಅತಿ ದೊಡ್ಡ ಸೂಪರ್ ಮೂನ್ ಗಳಲ್ಲಿ ಒಂದಾಗಿದೆ. ಈ ಸಮಯದಲ್ಲಿ ಬೀವರ್ ಗಳು ತಮ್ಮ ವಸತಿಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದವು. ಅದೇ ಸಮಯದಲ್ಲಿ  ಬೀವರ್ ಗಳ ತುಪ್ಪಳಕ್ಕೆ  ಬೇಟೆಗಾರರು ಬಲೆ ಬೀಸುತ್ತಿದ್ದರಿಂದ ಈ ಹೆಸರು ಬಂದಿದೆ.ಭಾರತದಲ್ಲಿ ನವೆಂಬರ್ ತಿಂಗಳ ಪೂರ್ಣಚಂದ್ರ ಸಾಮಾನ್ಯವಾಗಿ ಕಾರ್ತಿಕ ಮಾಸದ ಪೌರ್ಣಿಮೆಗೆ ಹೊಂದಿಕೊಳ್ಳುತ್ತದೆ. ಈ ಹುಣ್ಣಿಮೆ ಸಮಯದಲ್ಲಿ ದೀಪೋತ್ಸವ, ತುಳಸಿ ಪೂಜೆ, ಧಾರ್ಮಿಕ ಸ್ನಾನಾದಿ ಕಾರ್ಯಕ್ರಮಗಳು ಪ್ರಸಿದ್ಧ. ಶುದ್ಧತೆ ಶಾಂತಿ ಮತ್ತು ಆಂತರಿಕ ಬೆಳಕಿಗೆ ಮಹತ್ವವನ್ನು ಈ ಸಂದರ್ಭದಲ್ಲಿ ನೀಡಲಾಗುತ್ತದೆ.

ಡಿಸೆಂಬರ್ 2026 – Cold Moon: ಡಿಸೆಂಬರ್ ತಿಂಗಳಲ್ಲಿ ಬರುವ ಹುಣ್ಣಿಮೆ ಇದು. ವರ್ಷದ ಕೊನೆಯ ಹುಣ್ಣಿಮೆ ಇದು. ಇದನ್ನು ಶೀತಲ ಚಂದ್ರ ಎನ್ನುವರು.ಈ ಕೋಲ್ಡ್ ಮೂನ್ ನಮಗೆ ನಿಧಾನ ಗತಿ ಹಾಗೂ ಒಳ ಚಿಂತನೆಯ ಮೌಲ್ಯವನ್ನು ಕಲಿಸುತ್ತದೆ. ಶೀಘ್ರಗತಿಯಲ್ಲಿ ಸಾಗುವ ಜೀವನದಲ್ಲಿ ಸಮಾಧಾನ ತಾಳ್ಮೆ ಶಕ್ತಿ ಕೊಂಡುಕೊಳ್ಳುವುದು ಅತ್ಯವಶ್ಯಕ ಎನ್ನುವಂತಹ ಮಹತ್ವಪೂರ್ಣ ವಿಚಾರವನ್ನು ಇದು ನಮಗೆ ತಿಳಿಸುತ್ತದೆ. 

2026ರ ಪೂರ್ಣಚಂದ್ರದ ಆಧ್ಯಾತ್ಮಿಕ ಮಹತ್ವ:

ಈ ಹುಣ್ಣಿಮೆಯ ದಿನವು ಆಧ್ಯಾತ್ಮಿಕ ಉನ್ನತಿಗೆ ಸಹಾಯ ಮಾಡುತ್ತದೆ. ಈ ಸಮಯದಲ್ಲಿ ಸೂರ್ಯ ಹಾಗೂ ಚಂದ್ರನ ಶಕ್ತಿ ಅತ್ಯಧಿಕವಾಗಿ ಭೂಮಿಯ ಮೇಲೆ ಹರಿದು ಬರುತ್ತದೆ. ಈ ಹುಣ್ಣಿಮೆ ಚಂದ್ರನ ಕಾಂತಿ ಭೂಮಿಯ ಮೇಲೆ ವಿಜೃಂಭಿಸುತ್ತದೆ. ಚಂದ್ರ ಭೂಮಿಗೆ ಅತಿ ಸಮೀಪ ಇರುತ್ತದೆ.ಹಾಗಾಗಿ ಚಂದ್ರನಿಂದ ಸಾಕಷ್ಟು ಎನರ್ಜಿ ಭೂಮಿಗೆ ಬರುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಧ್ಯಾನ ಮತ್ತು ಯೋಗದ ಮಹತ್ವ ದೇಹ ಮತ್ತು ಮನಸ್ಸಿನ ಸಮತೋಲನಕ್ಕೆ ಸಹಾಯ ಮಾಡುತ್ತದೆ.

ಪೂರ್ಣಚಂದ್ರ ಮತ್ತು ವೈಜ್ಞಾನಿಕ ದೃಷ್ಟಿಕೋನ:

ಈ ಹುಣ್ಣಿಮೆಯ ದಿನದಂದು ಸಮುದ್ರದ ಅಲೆಗಳ ತೀವ್ರತೆ ಹೆಚ್ಚಾಗಿರುತ್ತದೆ. ಸಮುದ್ರದ ಅಲೆಗಳು ಅತಿ ವೇಗವಾಗಿ ದಡಕ್ಕೆ ಅಪ್ಪಳಿಸುತ್ತದೆ.

ಆದ್ದರಿಂದ ಈ ಪೂರ್ಣಚಂದ್ರ ದಿನದ ಮಹತ್ವವನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅತಿ ಅವಶ್ಯಕ. ಈಗಾಗಲೇ ಲೇಖನದಲ್ಲಿ ತಿಳಿಸಿರುವಂತೆ ಈ ಪೂರ್ಣ ಚಂದ್ರ ದಿನ ಎನ್ನುವಂಥದ್ದು ಧಾರ್ಮಿಕವಾಗಿ, ವೈಜ್ಞಾನಿಕವಾಗಿ, ಆಧ್ಯಾತ್ಮಿಕವಾಗಿ, ಮಾನಸಿಕವಾಗಿ, ಎಷ್ಟು ಮಹತ್ವಪೂರ್ಣದ್ದು ಎನ್ನುವ ಸಮಗ್ರ ಮಾಹಿತಿಯನ್ನು ಅರಿತು ಅನುಸರಿಸುವುದು ಸೂಕ್ತ. ನಿಮ್ಮ ಬದುಕಿನಲ್ಲಿ ನೆಮ್ಮದಿ ಸುಖ ಶಾಂತಿ ಶಿಸ್ತು ಸಮಯ ಪಾಲನೆ ಸಂಯಮ ಈ ಎಲ್ಲಾ ಬದುಕಿನ ಸೂತ್ರಗಳನ್ನು ಅಳವಡಿಸಿಕೊಳ್ಳಲು ಈ ಮಾಹಿತಿ ಅರಿಯುವುದು ಉತ್ತಮ.

Disclaimer:ಈ ಲೇಖನ ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ಧಾರ್ಮಿಕ ಅಥವಾ ವೈಜ್ಞಾನಿಕ ಸಲಹೆಯಾಗಿ ಇದನ್ನು ಪರಿಗಣಿಸಬಾರದು. 

Leave a comment